ಬೇಟೆ ಜಯವೀರ ವಿಕ್ರಮ್ ಸಂಪತ್ ಗೌಡ, ಅಂಕಣಗಾರರು ಕರೋನಾ ಯಾರನ್ನೂ ಬಿಡಲಿಲ್ಲ. ಅದಕ್ಕೆ ಕನ್ನಡ ಪತ್ರಿಕೆಗಳೂ ಹೊರತಲ್ಲ. ಪ್ರತಿದಿನ ಪುರವಣಿ ಮತ್ತು ಜಾಹೀರಾತುಗಳಿಂದ ಕೊಬ್ಬಿದ್ದ ಕನ್ನಡ ಪತ್ರಿಕೆಗಳು, ಬರಗಾಲದ ಜಾನುವಾರುಗಳಂತಾದವು. ಹೊಟ್ಟೆ ಎಂಬುದು ಹಪ್ಪಳವಾಯಿತು. ರಾಜ್ಯಮಟ್ಟದ ಪತ್ರಿಕೆಗಳಂತೂ ಕೆಲವು ದಿನ ಎಂಟು ಪುಟಕ್ಕಿಳಿದವು. ಇದ್ದಕ್ಕಿದ್ದಂತೆ ಪತ್ರಿಕೆಗಳು ಬಡವಾಗಿ ಹೋದವು. ದಿನ ಬೆಳಗಾದರೆ ಎದೆಗೆ ಪತ್ರಿಕೆಯನ್ನು ಅಪ್ಪಿಕೊಳ್ಳುತ್ತಿದ್ದವರೆಲ್ಲ ಕರೋನಾ ಸೋಂಕು ಹರಡುತ್ತದೆ ಎಂಬ ಭೀತಿಯಿಂದ, ಪತ್ರಿಕೆ ಓಡುವುದಿರಲಿ, ಮನೆಗೆ ತರಿಸುವುದನ್ನೇ ಬಿಟ್ಟರು. ಹೀಗಾಗಿ ಓದುಗರು ಕೈಬಿಟ್ಟರು. ಮತ್ತೊಂದೆಡೆ ಜಾಹೀರಾತುಗಳೆಲ್ಲಾ […]