– ವೀರನಾರಾಯಣ ಕೃಷ್ಣ ಎಂದೂ ಅಣ್ಣ ಬಲರಾಮನ ಕಾಲೆಳೆಯಲಿಲ್ಲ, ಆತನೊಂದಿಗೆ ಸ್ಪರ್ಧೆಗೆ ಬೀಳಲಿಲ್ಲ. ಬದಲಿಗೆ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಬಲರಾಮನನ್ನು ಕಾಪಾಡಿದ. ಕಡೆವರೆಗೂ ದೊರೆಯಾಗುವುದಿರಲಿ, ಯುವರಾಜನೂ ಆಗದೆ ಯದುಕುಲದ ಒಬ್ಬ ಸಾಮಾನ್ಯ ಸದಸ್ಯನಾಗಿಯೇ ಉಳಿದು ಲೋಕೋತ್ತರನಾದ. ಒಬ್ಬ ಪ್ರತಿಭಾನ್ವಿತ, ತನ್ನಷ್ಟೇ ಅಥವಾ ತನಗಿಂತ ಪ್ರತಿಭಾನ್ವಿತನನ್ನು ಸ್ಪರ್ಧಿಯಂತೆಕಾಣುವುದು, ಕಾಲೆಳೆಯುವುದು, ಒಂದು ಅವಕಾಶ ದೊರಕಿಬಿಟ್ಟರೆ ಎಲ್ಲಿ ತನಗಿಂತಲೂ ಮೇಲೇರಿಬಿಡುವನೋ ಎಂದು ಅಸೂಯೆಪಡುವುದು, ಮೂಲೆಗುಂಪು ಮಾಡುವುದನ್ನು ರಾಜಕೀಯ ವಲಯದಲ್ಲಿ, ಕಾರ್ಪೊರೇಟ್ ಜಗತ್ತಿನಲ್ಲಿ, ಹಲವು ಸಂಸ್ಥೆ-ಕಚೇರಿಗಳಲ್ಲಿ, ಸ್ನೇಹಿತರ ವಲಯದಲ್ಲಿ ಕಂಡಿದ್ದೇವೆ. ಅಷ್ಟೇಕೆ, ಕುಟುಂಬಗಳಲ್ಲೂ […]