ಭೋಪಾಲ್: ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವೈದ್ಯಾಧಿಕಾರಿ ಗಳ ಹಿಂಸೆಗೆ ಬೇಸತ್ತು ಕಿರಿಯ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ಗಂಟೆಗಳ ಕಾಲ ನಿರಂತರ ಕೆಲಸ ಮಾಡುವಂತೆ ಇಲಾಖೆಯ ಮೂವರು ಹಿರಿಯ ಮಹಿಳಾ ವೈದ್ಯರು ಕಿರಿಯ ವೈದ್ಯೆ ಬಾಲ ಸರಸ್ವತಿಗೆ ಹಿಂಸೆ ನೀಡುತ್ತಿದ್ದರಂತೆ. ಸೋಮ ವಾರ ಮನೆಯ ಪೂಜಾ ಕೋಣೆಯಲ್ಲಿ ಆಕೆಯ ಶವ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಸರಸ್ವತಿ ತಮ್ಮ ಇಲಾಖೆಯ ಮೂವರು ಹಿರಿಯ ಮಹಿಳಾ ವೈದ್ಯರಿಂದ ಅಪಾರ ಒತ್ತಡ ಮತ್ತು ನಿಂದನೆಗಳನ್ನು ಸಹಿಸಿ ಕೊಳ್ಳುತ್ತಿದ್ದರು […]