ಅಕ್ಷರ ದಾಮ್ಲೆ ಮನಃಶಾಸ್ತ್ರಜ್ಞ ‘ನಾನು ಇನ್ನು ಯಾಕೆ ಬದುಕಿರಬೇಕು? ನಾನು ಇದ್ದು ಯಾರಿಗೆ ಏನು ಲಾಭ ಇದೆ? ನಾನು ಸತ್ತರೆ ಆಳುವವರಾರು? ನಾನು ಇದ್ದು ಏನು ಮಾಡಬೇಕಾಗಿದೆ?’…ಇದು ವಿಷವನ್ನು ಕುಡಿದು ಆಮೇಲೆ ತನ್ನ ಚಿಕ್ಕಪ್ಪನಲ್ಲಿ ಆ ಯುವಕ ಬಂದು ಹೇಳಿದ ಮಾತು. ಅವನ ಜೀವನದಲ್ಲಿ ಹೇಳುವಂತಹ ಯಾವುದೇ ದುರ್ಘಟನೆಯೂ ಸಂಭವಿಸಿರಲಿಲ್ಲ. ಕಿತ್ತು ತಿನ್ನುವಂತಹ ಕಷ್ಟವೂ ಇರಲಿಲ್ಲ. ತಂದೆ ತಾಯಿಗೆ ಒಬ್ಬನೇ ಮಗ. ಚಿಕ್ಕಪ್ಪನಿಗೆ ಹುಡುಗ ಏನೋ ಹುಡುಗಾಟಿಕೆಯ ಮಾತುಗಳನ್ನಾಾಡುತ್ತಿಿದ್ದಾನೆ ಎಂದೇ ತೋರಿತ್ತು. ವಿಷ ಕುಡಿದು ಬಂದು ಮಾತನಾಡುತ್ತಿಿದ್ದೇನೆ […]