ಡಾ.ಕಾರ್ತಿಕ್ ಜೆ.ಎಸ್ ವಾಹನ ದಟ್ಟಣೆ ಮತ್ತು ಗಿಜಿ ಗುಡುವ ಜನಸಂದಣಿ ಮಧ್ಯೆ ಇದ್ದು ಬೇಸರವಾಗುತ್ತಿದೆಯೇ? ಹಾಗಿದ್ದರೆ, ಪ್ರಶಾಂತ ವಾತಾವರಣ ದಲ್ಲಿರುವ, ಮನಸ್ಸಿಗೆ ಉಲ್ಲಾಸ ನೀಡುವ ಸ್ಥಳವಾದ ‘ಕೈಲಾಸಗಿರಿ’ಗೆ ಭೇಟಿ ನೀಡಿ. ಕೈಲಾಸಗಿರಿಯು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣವಾಗಿದ್ದು ಪ್ರಕೃತಿ ಪ್ರಿಯರಿಗೆ (ವಿಶೇಷವಾಗಿ ಬೆಂಗಳೂರಿಗರಿಗೆ) ವಾರಾಂತ್ಯ ದಲ್ಲಿ ಭೇಟಿ ನೀಡಲು ಇರುವ ಉತ್ತಮ ಆಯ್ಕೆ. ಕೈಲಾಸಗಿರಿಯು, ಅಂಬಾಜಿ ದುರ್ಗ ಪರ್ವತ ಶ್ರೇಣಿಯ ಒಂದು ಬೆಟ್ಟವನ್ನು ಕೊರೆದು ನಿರ್ಮಿಸಿದ ಗುಹಾಂತರ ದೇವಾಲಯಗಳಿರುವ ತಾಣವಾಗಿದೆ. ನಮ್ಮ ಪಯಣ ಮುಂಜಾನೆ ಬೆಂಗಳೂರಿನಿಂದ ಆರಂಭವಾಯಿತು. […]