‘ಅಂಗಾರ ಅಂಗಾರ ಅಪ್ಪಯ್ಯ, ತಗ್ಗಿಗೆ ಬಿದ್ದರೆ ಕುಪ್ಪಯ್ಯ, ಒತ್ತಿ ಕಂಡರೆ ಕೆಂಪಯ್ಯ’ ಇದು ಹೆಬ್ಬಲಸಿನ ಹಣ್ಣಿನ ಬಗ್ಗೆ ಇರುವ ಒಂದು ಎದುರುಕಥೆ (ಒಗಟು). ಹೆಬ್ಬಲಸು ಗೊತ್ತು ತಾನೆ? ದಟ್ಟ ಕಾಡಿನಲ್ಲಿ ಮತ್ತು ಕಾಡಂಚಿನ ಊರುಗಳಲ್ಲಿ ಇರುವ ಬೃಹತ್ ಮರ. ನಮ್ಮ ಮನೆ ಹತ್ತಿರ, ದರೆಗೆ ತಾಗಿ ಕೊಂಡು ಹೆಬ್ಬಲಸಿನ ನಾಲ್ಕು ಮರಗಳಿದ್ದವು. ಇದರ ಕಾಯಿಯ ಗಾತ್ರ ಮಾತ್ರ ಹೆಸರಿಗೆ ವ್ಯತಿರಕ್ತ. ಪುಟಾಣಿ ಹಣ್ಣು ಇದು. ಹಲಸಿನ ಹಣ್ಣಿನ ಮಿನಿಯೇ ಚರ್ ಎನಿಸುವ ಹೆಬ್ಬಲಸಿನ ಹಣ್ಣನ್ನು, ನಗರದವರು, ಬಯಲುಸೀಮೆಯವರು […]