ಬೆಂಗಳೂರಿನ ಅತಿದೊಡ್ಡ ಆಹಾರ ಮಳಿಗೆ ಆರಂಭಿಸಿದ ನೇಚರ್ಸ್ ಬಾಸ್ಕೆಟ್ ಬೆಂಗಳೂರು: ಭಾರತದ ಪ್ರಮುಖ ಪ್ರೀಮಿಯಂ ರಿಟೇಲ್ ವ್ಯಾಪಾರಿ ಮತ್ತು RPSG ಗ್ರೂಪ್ನ ಭಾಗವಾಗಿರುವ ನೇಚರ್ಸ್ ಬಾಸ್ಕೆಟ್, ಇಂದು ಬೆಂಗಳೂರಿನಲ್ಲಿ ತನ್ನ ಮೊದಲ ಪ್ರಮುಖ ಆಹಾರ ಮಳಿಗೆಯನ್ನು ಅನಾವರಣಗೊಳಿಸಿದೆ. ಬಾಲಿವುಡ್ ಐಕಾನ್ ಕರಿಷ್ಮಾ ಕಪೂರ್ ಅವರು ಉದ್ಘಾಟಿಸಿರುವ, 10,500 ಚದರ ಅಡಿಯ ಈ ಪಾಕ ತಾಣವು, ಪಾಕಶಾಲೆಯ ಆಯ್ದ ಅನುಭವಗಳಿಗೆ ಜೀವ ನೀಡುವ ಬ್ರ್ಯಾಂಡ್ನ ಬದ್ಧತೆಗೆ ಸಾಕ್ಷಿಯಾಗಿದೆ. ಇದು ಬೆಂಗಳೂರಿನಲ್ಲಿ ಒಂಬತ್ತನೇ ಮಳಿಗೆಯಾಗಿದ್ದು, ದೇಶದ 35 ನೇ ಮಳಿಗೆಯಾಗಿದೆ. ನೇಚರ್ಸ್ ಬಾಸ್ಕೆಟ್ ದೇಶಾದ್ಯಂತ ಐಷಾರಾಮಿ ಕಿರಾಣಿ ರಿಟೇಲ್ ವ್ಯಾಪಾರದಲ್ಲಿ ಪ್ರವರ್ತಕನಾಗಿ ತನ್ನ ಅಸ್ತಿತ್ವವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ಸ್ಪೆನ್ಸರ್ಸ್ ರಿಟೇಲ್ ಮತ್ತು ನೇಚರ್ಸ್ ಬಾಸ್ಕೆಟ್ನ ಅಧ್ಯಕ್ಷ ಶಾಶ್ವತ್ ಗೋಯೆಂಕಾ ಪ್ರತಿಕ್ರಿಯಿಸುತ್ತಾ, “ಬೆಂಗಳೂರಿನಲ್ಲಿ ನಮ್ಮ ಮೊದಲ ಪ್ರಮುಖ ಆಹಾರ ಮಳಿಗೆಯ ಪ್ರಾರಂಭವು ನೇಚರ್ಸ್ ಬಾಸ್ಕೆಟ್ಗೆ ಮಹತ್ವದ ಮೈಲಿಗಲ್ಲಾಗಿದೆ. ಈ ಫ್ಲ್ಯಾಗ್ಶಿಪ್ ಮಳಿಗೆಯು ಬೆಂಗಳೂರಿನ ಬೆಳೆಯುತ್ತಿರುವ ಪ್ರೀಮಿಯಂ, ಕ್ಯುರೇಟೆಡ್ ಪಾಕಶಾಲೆಯ ಅನುಭವಗಳ ಬೇಡಿಕೆಗಳಿಗೆ ಸೂಕ್ತ ತಾಣವಾಗಲಿದೆ. ಅತ್ಯುತ್ತಮವಾದ ಜಾಗತಿಕ ಗೌರ್ಮೆಟ್ ತಿನಿಸುಗಳನ್ನು ಸ್ಥಳೀಯ ಪ್ರಾಶಸ್ತ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಈ ಫ್ಲ್ಯಾಗ್ಶಿಪ್ ಬೆಂಗಳೂರಿನ ರಿಟೇಲ್ ಭೂದೃಶ್ಯವನ್ನು ಮೇಲೆತ್ತುವುದು ಮಾತ್ರವಲ್ಲದೆ, ಪ್ರೀಮಿಯಂ ಕಿರಾಣಿ ವಲಯದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ಇಂತಹ ನವೀನ ಪರಿಕಲ್ಪನೆಗಳೊಂದಿಗೆ ನೇಚರ್ಸ್ ಬಾಸ್ಕೆಟ್ನ ಹೆಜ್ಜೆಗುರುತನ್ನು ವಿಸ್ತರಿಸುವ ನಮ್ಮ ಬದ್ಧತೆಯು, ಭಾರತದಲ್ಲಿ ಐಷಾರಾಮಿ ರಿಟೇಲ್ ವ್ಯಾಪಾರವನ್ನು ಮರುವ್ಯಾಖ್ಯಾನಿಸುವ ನಮ್ಮ ದೂರ ದೃಷ್ಟಿಯ ಭಾಗವಾಗಿದೆ” ಎಂದರು. ಮತ್ತೊಂದು ಉದ್ಘಾಟಣೆಗೆ ಹಿಂತಿರುಗಿದ ಕರಿಷ್ಮಾ ಕಪೂರ್, ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ“ ಪ್ರಪಂಚದಾದ್ಯಂತದ ಅತ್ಯುತ್ತಮ ಪದಾರ್ಥಗಳನ್ನು ಇಲ್ಲಿ ಒಟ್ಟುಗೂಡಿಸುತ್ತಾರೆ, ನನಗಿದು ತುಂಬಾ ಇಷ್ಟ. ಬೆಂಗಳೂರಿನಲ್ಲಿ ಈ ಸುಂದರವಾದ ಪ್ರಮುಖ ಮಳಿಗೆಯನ್ನು ಉದ್ಘಾಟಿಸಲು ಮತ್ತು ನಗರದ ಉತ್ಸಾಹಿ ಆಹಾರಪ್ರಿಯರೊಂದಿಗೆ ಈ ಅದ್ಭುತ ಅನುಭವವನ್ನು ಹಂಚಿಕೊಳ್ಳುವುದು ನನಗೆ ಗೌರವದ ಸಂಗತಿಯಾಗಿದೆ” ಎಂದರು. ಬೆಂಗಳೂರಿನ ಈ ಪ್ರಮುಖ ಮಳಿಗೆಯು ಐಷಾರಾಮಿ ಚಿಲ್ಲರೆ ವ್ಯಾಪಾರದಲ್ಲಿ ಹೊಸ ಮಾನದಂಡವನ್ನು ಸೃಷ್ಟಿಸುತ್ತಾ, ಸ್ಥಳೀಯ ಕಲಾತ್ಮಕತೆಯೊಂದಿಗೆ ಜಾಗತಿಕ ಅತ್ಯಾಧುನಿಕತೆಯನ್ನು ಸಂಯೋಜಿಸುತ್ತಾ ಸಾಟಿಯಿಲ್ಲದ ಶಾಪಿಂಗ್ ಅನುಭವವನ್ನು ನೀಡುತ್ತದೆ. ಗ್ರಾಹಕರ ಗಮನ ಸೆಳೆಯಲು ಹಲವು ಮೊದಲುಗಳನ್ನು ಪರಿಚಯಿಸಿದೆ. ಕೊಂಬುಚಾ ಟ್ಯಾಪ್ ಜೊತೆ ಲೈವ್ ಕೊಂಬುಚಾ ಬಾರ್, ಸಸ್ಯ-ಆಧಾರಿತ ಸಿಹಿತಿಂಡಿಗಳನ್ನು ನೀಡುವ ವೆಗನ್ ಪ್ಯಾಟಿಸ್ಸೆರಿ, ತಾಜಾ ಬೇಯಿಸಿದ ಬೆಚ್ಚಗಿನ ಕುಕೀಗಳೊಂದಿಗೆ ಲೈವ್ ಕುಕೀ ಕಾರ್ನರ್, ಲೈವ್ ಕುನಾಫಾ ಮತ್ತು ಬಕ್ಲಾವಾದೊಂದಿಗೆ ಅಧಿಕೃತ ಮಧ್ಯಪ್ರಾಚ್ಯ ಉಪಹಾರಗಳು, ಆರೋಗ್ಯಕರ ಸಿರಿಧಾನ್ಯಗಳಿಗಾಗಿ ಸಿರಿಧಾನ್ಯ ಕೆಫೆ, ಮತ್ತು ಟೇಸ್ಟಿ, ಪ್ರೀಮಿಯಂ ತಿಂಡಿಗಳ ಸಾವಯವ ಸ್ನ್ಯಾಕ್ಸ್ ಕೌಂಟರ್ ಸೇರಿದಂತೆ, ಈ ವೈಶಿಷ್ಟ್ಯಗಳು ಮೊದಲ ಬಾರಿಗೆ ಒಂದೇ ಸೂರಿನಡಿ ಸಿಗಲಿವೆ. ಹಾಗೇ ಸಾಫ್ಟ್- ರ್ವ್ ಕಾರ್ನರ್ ಮತ್ತು ಗೆಲಾಟೊ ಅಟೆಲಿಯರ್ ನಿಮ್ಮ ಸಿಹಿತಿಂಡಿಯ ಕಡುಬಯಕೆಗಳನ್ನು ಮರುವ್ಯಾಖ್ಯಾನಿಸುತ್ತಾ ಅಂತರರಾಷ್ಟ್ರೀಯ ರುಚಿಗಳನ್ನು ನೀಡುತ್ತದೆ. ತನ್ನ ಗೌರ್ಮೆಟ್ ತಿನಿಸುಗಳನ್ನು ಹೆಚ್ಚಿಸುತ್ತಾ, ಈ ಸ್ಟೋರ್ 50 ಕ್ಕೂ ಹೆಚ್ಚು ದೇಶಗಳ ಅಪರೂಪದ ಮತ್ತು ವಿಶಿಷ್ಟ ಚೀಸ್ಗಳನ್ನು ಹೊಂದಿದೆ. ನಿಜವಾದ ಜಾಗತಿಕ ರುಚಿ ಮತ್ತು ಸುವಾಸನೆಯ ಅನುಭವ ನೀಡುವುದಕ್ಕಾಗಿ ಊಹಿಸಲಾಗದಷ್ಟು ಕಡಿಮೆ ಸಮಯದ ಅಂತರದಲ್ಲಿ ಇದು ವಿತರಿಸಲ್ಪಡುತ್ತದೆ. ವಿನೂತನ ಹಣ್ಣುಗಳು ಮತ್ತು ತರಕಾರಿಗಳ ವಿಭಾಗವು, ಬೆಂಗಳೂರಿಗೆ ಜಾಗತಿಕ ತಾಜಾತನದ ಸ್ಪರ್ಶವನ್ನು ನೀಡುತ್ತಾ, ಭಾರತದಲ್ಲಿ ಹಲವು ಪದಾರ್ಥಗಳನ್ನು ಮೊದಲ ಬಾರಿಗೆ ಪರಿಚಯಿಸಲಿದೆ. ಟ್ರಫಲ್ ಬಾರ್ ಆಚರಣೆಯು, ಆಹಾರ ವಿಮರ್ಶಕರಿಗೆ ಪಾಕಶಾಲೆಯ ಐಷಾರಾಮಿ ಸೃಷ್ಟಿಗಳನ್ನು ಪ್ರದರ್ಶಿಸುತ್ತದೆ. ಸ್ಟೋರ್ನ ಸೊಬಗನ್ನು ಹೆಚ್ಚಿಸಲು ತಾಜಾ ಹೂವುಗಳು, ಗಿಡಮೂಲಿಕೆಗಳನ್ನು ಸಹ ಒಳಗೊಂಡಿದೆ. ಪ್ರೀಮಿಯಂ ಸಿಗಾರ್ಗಳ ವಿಶೇಷ ಆಯ್ಕೆಯಿಂದ ಹಿಡಿದು ನಮ್ಮ ವಿಶೇಷ ಅತಿಥಿಗಳ ಅಭಿರುಚಿಯನ್ನು ಪೂರೈಸಲು ವಿನ್ಯಾಸಗೊಳಿಸಲಾದ ಬಾರ್ ಪರಿಕರಗಳ ಸೂಕ್ಷ್ಮವಾದ ಆಯ್ದ ಶ್ರೇಣಿಯನ್ನು ಸಹ ನೋಡಬಹುದು. ಹೆಚ್ಚುವರಿಯಾಗಿ, ಪ್ರೀಮಿಯಂ ವೈನ್ ಮತ್ತು ಮದ್ಯಗಳ ವಿಸ್ತಾರವಾದ ಸಂಗ್ರಹವು ಲಭ್ಯವಿರಲಿದೆ.
ಆಹಾರ ಉದ್ಯಮದ ದೈತ್ಯರು, ಪಿಜ್ಜಾ ಹಟ್ ಮತ್ತು ITC ಪಾಲುದಾರಿಕೆಯಲ್ಲಿ ಮೊದಲ ಬಾರಿಗೆ ಕೈಜೋಡಿಸಿದ್ದು, ಇದರಲ್ಲಿ ಪಿಜ್ಜಾ ಹಟ್ ಹೆಚ್ಚು ಮಾರಾಟವಾಗುವ ಸನ್‌ಫೀಸ್ಟ್ ಪಾನೀಯಗಳಾದ ಡಾರ್ಕ್ ಫ್ಯಾಂಟಸಿ...
CV Ananda Bose : ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಅಧಿಕಾರಕ್ಕೆ ಎರಡು ವರ್ಷ ಪೂರೈಸಿದ್ದು, ಶನಿವಾರ ರಾಜಭವನದಲ್ಲಿ ತಮ್ಮ ಪ್ರತಿಮೆಯನ್ನು...
Justin Trudeau : ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಅಧಿಕಾರಿಗಳ ವಿರುದ್ಧವೇ ಕಿಡಿಕಾರಿದ್ದಾರೆ. ಕೆನಡಾದ ಗುಪ್ತಚರ ಇಲಾಖೆಯ ಅಧಿಕಾರಿಗಳನ್ನು ಅಪರಾಧಿಗಳು ಎಂದು ಕರೆದಿದ್ದಾರೆ....
Arvind Kejriwal : ಟ್ವೀಟ್ ಮಾಡಿದ ಕೇಜ್ರಿವಾಲ್ ಜಾರ್ಖಂಡ್ ಜನರು ಸೊರೈನ್ ಮೇಲೆ ನಂಬಿಕೆ ಇಟ್ಟು ಮತ ಹಾಕಿ ಗೆಲ್ಲಿಸಿದ್ದಾರೆ. ಅವರ ಈ ಅದ್ಭುತ ಗೆಲುವಿಗೆ...
ಕೊಲ್ಹಾರ: ರಾಜ್ಯದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಪ್ರಯುಕ್ತ ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಕಾಂಗ್ರೆಸ ಮುಖಂಡರು ವಿಜಯೋತ್ಸವ ಆಚರಣೆ ನಡೆಸಿದರು. ಈ ಸಂದರ್ಭದಲ್ಲಿ...
ಕೊಲ್ಹಾರ: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನಿಂದ ಆಘಾತಗೊಂಡು ಪಟ್ಟಣದ ಬಿಜೆಪಿ ಮುಖಂಡರಾದ ವಿರಭದ್ರಪ್ಪ ಬಾಗಿ ಫಲಿತಾಂಶ ವೀಕ್ಷಿಸುತ್ತಿದ್ದ ಟಿ.ವಿ ಒಡೆದು ಹಾಕಿದ ಘಟನೆ...
ಕೊಲ್ಹಾರ: ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಸಂವಿಧಾನ ಜಾಗೃತಿ ಜಾಥಾ ಜರುಗಿತು. ಪಟ್ಟಣದ ದಿಗಂಬರೇಶ್ವರ ಮಠದಿಂದ ಪ್ರಾರಂಭವಾದ ಜಾಥಾ ಶಿವಾಜಿ ವೃತ್ತ, ಬಸವೇಶ್ವರ...
ಚನ್ನಪಟ್ಟಣದ ಜನತೆ ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ. ಅವರ ಅದೇಶವನ್ನು ಒಪ್ಪಿಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವ ವ್ಯಕ್ತಿ ನಾನಲ್ಲ, ಎದೆಗುಂದುವ ಪ್ರಶ್ನೆಯೂ ಇಲ್ಲ....
ಶಿಗ್ಗಾಂವಿ ಸವಣೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿ ಗೆಲುವು ಸಾಧಿಸಿದೆ ಎಂದು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharat Bommai) ಆರೋಪಿಸಿದ್ದಾರೆ. ಈ...