ಡಾ.ಉಮಾಮಹೇಶ್ವರಿ ಎನ್. ಈ ಬೆಟ್ಟವನ್ನೇರಿದರೆ ಸುತ್ತಲೂ ಹಸಿರಿನಿಂದ ತುಂಬಿದ ಗದ್ದೆಗಳನ್ನು ಕಾಣಬಹುದು, ನದಿಯ ಅಂಕುಡೊಂಕು ಒಯ್ಯಾರದ ನೋಟವನ್ನೂ ನೋಡಬಹುದು. ಆ ಬೆಟ್ಟದ ತುದಿ ಏರಿದರೆ, ಸುತ್ತಲಿನ ನಿಸರ್ಗದ ನೋಟ ಸುಂದರ. ಹಾಗೆ ನೋಡಹೋದರೆ, ಬೆಟ್ಟ ತುಂಬಾ ಎತ್ತರವಿಲ್ಲ. ಆದರೆ ಮೇಲಿನಿಂದ ಕಾಣುವ ನೋಟದಲ್ಲಿ ಮುದವಿದೆ, ಸೊಗಸಿದೆ. ಕಾವೇರಿ ನದಿಯ ಪಾತ್ರವು ಉದಕ್ಕೂ, ಅಂಕುಡೊಂಕಾಗಿ ಹರಿದು ಹೋಗಿರುವುದು ಒಂದೆಡೆ ಕಂಡರೆ, ಇಕ್ಕೆಲಗಳಲ್ಲೂ ಹಸಿರಿನ ಸಿರಿ ತುಂಬಿರುವ ಬತ್ತದ ಗದ್ದೆಗಳ ಮೋಹಕ ನೋಟ. ಅನತಿ ದೂರದಲ್ಲಿ ನದಿಗಳ ಕವಲುಗಳು ಕೂಡುವ […]