ವಿಶೇಷ ವರದಿ: ಸುಷ್ಮಾ ಚಿಕ್ಕಕಡಲೂರು ಬೆಂಗಳೂರು ನನೆಗುದಿಗೆ ಬಿದ್ದಿರುವ ರಸ್ತೆ ದುರಸ್ತಿ ಕಾಮಗಾರಿ ಗುಂಡಿಯಲ್ಲಿ ಬಿದ್ದೇಳುವ ಬೈಕ್ ಸವಾರರು ಸಿಲಿಕಾನ್ ಸಿಟಿಯ ಬಹುತೇಕ ಮುಖ್ಯ ರಸ್ತೆಗಳ ಕಾಮಗಾರಿ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಕೆಂಗೇರಿ ಸುತ್ತ ಮುತ್ತಲಿನ ರಸ್ತೆಗಳನ್ನು ಕಾಮಗಾರಿ ನೆಪದಲ್ಲಿ ಅಗೆದು, ಅರ್ಧಕ್ಕೆ ಬಿಟ್ಟಿರುವುದರಿಂದ ರಸ್ತೆ ಗಳೇ ಮಳೆಗಾಲದ ಯಮಲೋಕವಾಗಿ ಮಾರ್ಪಟ್ಟಿವೆ. ಮಳೆಗಾಲಕ್ಕೂ ಮುನ್ನ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಬಿಬಿಎಂಪಿ ಮುಂದಾಗದ ಹಿನ್ನೆಲೆಯಲ್ಲಿ ರಸ್ತೆಗಳು ಯಮಸ್ವರೂಪಿಯಾಗಿ ಮಾರ್ಪಟ್ಟಿವೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸ್ಥಳೀಯ ಶಾಸಕರಿಗೆ, ಬಿಬಿಎಂಪಿಯವರಿಗೆ […]