ತಿರುವನಂತಪುರಂ: ಕೇರಳದಲ್ಲಿ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿದರೆ ತಿದ್ದುಪಡಿ ಮಾಡಲಾದ ಕಾನೂನುಗಳ ಅಡಿಯಲ್ಲಿ ಗರಿಷ್ಠ 50 ಸಾವಿರ ರೂ. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕಸ ಮುಕ್ತ ಕೇರಳ ಅಭಿಯಾನದ ಭಾಗವಾಗಿ ಕಳೆದ ವಾರ ಹೊರಡಿಸಲಾದ ಕೇರಳ ಪಂಚಾಯತ್ ರಾಜ್ (ತಿದ್ದುಪಡಿ) ಸುಗ್ರೀವಾಜ್ಞೆ 2023 ಮತ್ತು ಕೇರಳ ಪುರಸಭೆ (ತಿದ್ದುಪಡಿ) ಸುಗ್ರೀವಾಜ್ಞೆ 2023 ರ ಪ್ರಕಾರ, ನಿಯಮ ಉಲ್ಲಂಘಿಸಿದವರು ದಂಡ ಪಾವತಿಸಲು ವಿಫಲವಾದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಾರ್ವಜನಿಕ ಮತ್ತು […]