ಬಳ್ಳಾರಿ: ಮ್ಯಾಟ್ರಿಮೋನಿ ಆಯಪ್ ದುರ್ಬಳಕೆ ಮಾಡಿ ಶಿಕ್ಷಕನಿಗೆ ವಂಚನೆ ಎಸಗ ಲಾಗಿದೆ. ಕೇರಳ ಮೂಲದ ಯುವತಿಯರ ಮಾತಿಗೆ ಮರುಳಾಗಿ ಶಿಕ್ಷಕ ಬರೋಬ್ಬರಿ 8.5 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿನಿಯೆಂದು ನಂಬಿಸಿ ಕೇರಳದ ಆ ಯುವತಿ ಮೋಸ ಮಾಡಿ ದ್ದಾಳೆ. ಒಂದು ವಂಚಕ ತಂಡವೇ ಇದರಲ್ಲಿ ಭಾಗಿಯಾಗಿದೆ. ಹಲವು ದಿನಗಳಿಂದ ನಿರಂತರವಾಗಿ ವಾಟ್ಸಾಪ್ ಚಾಟ್, ಫೋನ್ ಕಾಲ್ ಮಾಡಿ ಯುವತಿಯರು ವಂಚಿಸಿ ದ್ದಾರೆ. ಸಂಡೂರು ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕ ದೇವೇಂದ್ರಪ್ಪ ಎಂಬುವವರೇ ಮೋಸ ಕ್ಕೀಡಾದ ವ್ಯಕ್ತಿ. […]