ಚೆನ್ನೈ: ನೈಲಾನ್, ಪ್ಲಾಸ್ಟಿಕ್ ಅಥವಾ ಇನ್ನಾವುದೇ ಕೃತಕ ವಸ್ತುಗಳಿಂದ ತಯಾರಿಸಿದ ‘ಮಾಂಜಾ ದಾರಗಳು’ ಎಂದು ಜನಪ್ರಿಯ ವಾಗಿರುವ ಗಾಳಿಪಟ ಹಾರಿಸುವ ದಾರಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ಬಳಕೆಯನ್ನು ತಮಿಳುನಾಡು ಸರ್ಕಾರವು ಸಂಪೂರ್ಣ ನಿಷೇಧಿಸಿದೆ. ಗಾಳಿಪಟ ಹಾರಿಸುವ ಸ್ಪರ್ಧೆಗಳಲ್ಲಿ ಅಥವಾ ಇತರ ಸಂದರ್ಭಗಳಲ್ಲಿ ಜನರು, ಪ್ರಾಣಿಗಳು ಮತ್ತು ವಿಶೇಷವಾಗಿ ಪಕ್ಷಿಗಳ ಗಾಯ ಮತ್ತು ಕೆಲವೊಮ್ಮೆ ಸಾವು ಗಳನ್ನು ತಡೆಯಲು ಇದು ಒಂದು ಹೆಜ್ಜೆಯಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ […]