ಲಕ್ಷದ್ವೀಪ: ಲಕ್ಷದ್ವೀಪದಲ್ಲಿ ಶುಕ್ರವಾರ ವಾರದ ರಜೆ ನೀಡುವ ಸಂಪ್ರದಾಯಕ್ಕೆ ಆಡಳಿತ ವ್ಯವಸ್ಥೆ ತಿಲಾಂಜಲಿ ನೀಡಿದ್ದು, ಇನ್ನು ಮುಂದೆ ಶುಕ್ರವಾರ ಶಾಲೆಗಳಿಗೆ ರಜೆ ಇರುವುದಿಲ್ಲ. ದ್ವೀಪದಲ್ಲಿ ಶುಕ್ರವಾರದ ರಜೆ ರದ್ದುಪಡಿಸಿ. ಎಲ್ಲ ಶಾಲೆಗಳಿಗೆ ಭಾನುವಾರ ರಜೆ ನೀಡುವ ಹೊಸ ವೇಳಾಪಟ್ಟಿಯನ್ನು ಲಕ್ಷದ್ವೀಪ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಇದರೊಂದಿಗೆ ಧಾರ್ಮಿಕ ನೆಲೆಯಲ್ಲಿ ಶುಕ್ರವಾರ ರಜಾ ಸೌಲಭ್ಯವನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳು ಈ ವಿಶೇಷ ಸೌಲಭ್ಯದಿಂದ ವಂಚಿತ ರಾಗಲಿದ್ದಾರೆ. ಲಕ್ಷದ್ವೀಪದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಆರು ದಶಕಗಳ ಹಿಂದೆ ಶಾಲೆಗಳು ಆರಂಭವಾದ ದಿನದಿಂದ […]