ತುಮಕೂರು: ತಂದೆ ಮೃತಪಟ್ಟ ದುಃಖದ ನಡುವೆ ಕರ್ತವ್ಯಪ್ರಜ್ಞೆ ತೋರಿಸಿರುವ 11 ವರ್ಷದ ಬಾಲಕಿ, ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ (Last Rites) ನೆರವೇರಿಸಿ ಇತರರಿಗೆ ಮಾದರಿಯಾಗಿರುವ ಪ್ರಸಂಗ ತುಮಕೂರು (Tumkur News) ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಹಿರೇಹಳ್ಳಿ ಸಮೀಪದ ಪೆಮ್ಮನಹಳ್ಳಿ ಗ್ರಾಮದ ನಿವಾಸಿ ಕೆಂಪರಾಜು (48) ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ, 6ನೇ ತರಗತಿ ವ್ಯಾಸಂಗ ಮಾಡುತ್ತಿರುವ 11 ವರ್ಷದ ಮೋನಿಷಾ, ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು. ಈ ಮೂಲಕ ಮೋನಿಷಾ […]