– ಕನ್ನಡಿಗರು ಇತರರನ್ನು ಗೌರವಿಸಬೇಕು – ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೆಂಗಳೂರು: ಬಹುಭಾಷಿಕ ವಾತಾವರಣದಲ್ಲಿ ಎಂದೆಂದಿಗೂ ಕನ್ನಡ ಮರೆಯಬಾರದು. ಕನ್ನಡವೇ ನಮ್ಮ ಸಾರ್ವಭೌಮ ಭಾಷೆಯಾಗಿರಬೇಕು. ಕನ್ನಡಿಗರು ಇತರರನ್ನು ಗೌರವಿಸಬೇಕು ಎಂದು ಲೋಕಾ ಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ. ನಗರದ ಪುರಭವನದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಕುವೆಂಪು ಜನ್ಮ ದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕರ್ನಾಟಕ ಸುವರ್ಣ ಮಹೋ ತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿ ವಾಣಿ ನಮ್ಮ ನಾಣ್ಣುಡಿಯಾಗಬೇಕು. […]