ಲಂಡನ್: ಅಂತರರಾಷ್ಟ್ರೀಯ ಯೋಗ ದಿನಕ್ಕೆ ಕೆಲ ದಿನಗಳು ಬಾಕಿ ಉಳಿದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಭಾರತೀಯ ಹೈಕಮಿಷನ್ ಯೋಗ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ 700 ಮಂದಿ ಉತ್ಸಾಹದಿಂದ ಪಾಲ್ಗೊಂಡರು. ಐಕಾನಿಕ್ ಪ್ರತಿಮೆಗಳಿರುವ ಟ್ರಫಾಲ್ಗರ್ ಸ್ಕ್ವೇರ್‌ನಲ್ಲಿ ಕಾರ್ಯಕ್ರಮ ಆಯೋಜಿಸ ಲಾಗಿದ್ದು, ಗಮನ ಸೆಳೆದಿದೆ. ಇಂಡಿಯನ್ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ, ಲಂಡನ್‌ನ ಈ ಕೇಂದ್ರ ಸ್ಥಾನದಲ್ಲಿ 700ಕ್ಕೂ ಅಧಿಕ ಜನರನ್ನು ಸೇರಿಸಲು ಸಾಧ್ಯವಾದದ್ದರಿಂದ ಅತ್ಯಂತ ಸಂತಸವಾಗಿದೆ. ಪ್ರತಿಷ್ಠಿತ ಪ್ರತಿಮೆಗಳು ಸುತ್ತಲೂ ಇವೆ. ಹಲವು ಯೋಗ ಶಾಲೆಗಳು ಸಹ […]