Friday, 25th October 2024

ಬಿಎಂಟಿಸಿ ಚಾಲಕನ ಅಜಾಗರೂಕತೆ: ಗೃಹಿಣಿ ಬಲಿ

ಬೆಂಗಳೂರು: ಬೆಂಗಳೂರಿನ ಮಡಿವಾಳದಲ್ಲಿ ಬಿಎಂಟಿಸಿ ಚಾಲಕನ ಅಜಾಗರೂಕತೆಯಿಂದಾಗಿ ಮಹಳೆಯೊಬ್ಬರು ಮೃತಪಟ್ಟಿದ್ದಾರೆ. 21 ವರ್ಷದ ಸೀಮಾ ಮೃತ ದುರ್ದೈವಿ. ಸಿಲ್ಕ್‌ ಬೋರ್ಡ್ ಜೆಂಕ್ಷನ್ ಬಳಿಯ ಮಡಿವಾಳ ಫ್ಲೈ ವೋವರ್ ಮೇಲೆ ದ್ವಿಚಕ್ರವಾಹನದಲ್ಲಿ ಮಗುವಿನೊಂದಿಗೆ ಈ ಮಹಿಳೆ ಹಾಗೂ ಪುರುಷ ತೆರಳುತ್ತಿದ್ದರು. ಈ ವೇಳೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮೂರು ಜನ ಕೆಳಗೆ ಬಿದ್ದಾರೆ. ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಗುರುಮೂರ್ತಿ ಹಾಗೂ ಮಗು ಗಾನವಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಸ್ಕಾಂನಲ್ಲಿ ಲೈನ್ ಮ್ಯಾನ್ ಆಗಿ ಗುರುಮೂರ್ತಿ ಕೆಲಸ ಮಾಡುತ್ತಿದ್ದಾರೆ. […]

ಮುಂದೆ ಓದಿ