ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಯ್ಕೆ ಚುನಾವಣೆಯಲ್ಲೂ ಶಿವಸೇನೆ ಯ ರೆಬೆಲ್ ಶಾಸಕರ ಬಣ ಮೇಲುಗೈ ಸಾಧಿಸಿದೆ. ಶಿವಸೇನೆ ರೆಬೆಲ್ ಬಣ ಹಾಗೂ ಬಿಜೆಪಿಯ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನಾರ್ವೇಕರ್ ಭಾನು ವಾರ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದ್ದು, 164 ಮತಗಳನ್ನು ಪಡೆದ ನಾರ್ವೇಕರ್ ಅವರು 107 ಮತಗಳನ್ನು ಪಡೆದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಅಭ್ಯರ್ಥಿ ರಾಜನ್ ಸಾಲ್ವಿ ಅವರನ್ನು ಸೋಲಿಸಿದರು. […]