ಪ್ರಧಾನಿಗೇ ರೋಪು ಹಾಕಿದ್ದರು! ಹದ ತಪ್ಪಿ ಆಡುವ ಮಾತುಗಳಿಂದಾಗಿ ಏನೆಲ್ಲಾ ಪಾಡು ಪಡಬೇಕಾಗುತ್ತದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು. ಅದರಲ್ಲೂ, ಅಂತಾರಾಷ್ಟ್ರೀಯ ಬಾಂಧವ್ಯಗಳ ವಿಷಯದಲ್ಲಿ ಮಾತನಾಡುವಾಗ ಎಷ್ಟು ಎಚ್ಚರ ದಿಂದಿದ್ದರೂ ಸಾಲದು. ಒಂದಿಡೀ ದೇಶದ ಪ್ರಜೆಗಳ ಭಾವನೆ ಮತ್ತು ಧೋರಣೆಗಳನ್ನು ಪ್ರತಿನಿಽಸುವ ಪ್ರಧಾನಿ ಅಥವಾ ರಾಷ್ಟ್ರಾಧ್ಯಕ್ಷರು ಈ ವಿಷಯದಲ್ಲಿ ಒಂದು ಗುಲಗಂಜಿ ತೂಕ ಹೆಚ್ಚೇ ವಿವೇಚನೆ ಮೆರೆಯಬೇಕಾಗುತ್ತದೆ. ಆದರೆ, ಜಾಗತಿಕ ಭೂಪಟದಲ್ಲಿ ಒಂದು ಬಿಂದುವಿನಂತೆ ಗೋಚರಿಸುವಷ್ಟು ಭೌಗೋಳಿಕ ವ್ಯಾಪ್ತಿ ಹೊಂದಿರುವ ಮಾಲ್ಡೀವ್ಸ್ ದೇಶದ […]