-ಡಾ.ಎ.ಜಯ ಕುಮಾರ್ ಶೆಟ್ಟಿ ಅಪೌಷ್ಟಿಕತೆ ಎನ್ನುವ ಶಬ್ದವೇ ನಮ್ಮ ಮನಸ್ಸಿಗೆ ಬೇಸರ ಮತ್ತು ಸಮಾಜಕ್ಕೆ ಕಸಿವಿಸಿ ಉಂಟುಮಾಡುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಉರುಳಿದ್ದರೂ ಮಕ್ಕಳ, ಮಹಿಳೆಯರ ಮತ್ತು ವಂಚಿತ ಸಮುದಾಯಗಳ ಜೀವ ಮತ್ತು ಆರೋಗ್ಯಗಳನ್ನು ಅಪಾಯಕ್ಕೀಡು ಮಾಡುತ್ತಿರುವ ಹಸಿವು ಮತ್ತು ಅಪೌಷ್ಟಿಕತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸವಾಲಾಗಿಯೇ ಉಳಿದಿದೆ. ಇತ್ತೀಚಿನ ‘ಕ್ರೆಡಿಟ್ ಸೂಸಿ ಗ್ಲೋಬಲ್ ವೆಲ್ತ್ ರಿಪೋರ್ಟ್’ ಪ್ರಕಾರ ಅತಿ ವೇಗವಾಗಿ ಸಂಪತ್ತನ್ನು ಸೃಷ್ಟಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು; ಆದರೂ ನಮ್ಮಲ್ಲಿ ಹಸಿವು ಮತ್ತು ತೀವ್ರತರನಾದ […]