Meghana Shankarappa: ಕನ್ನಡದ ಅತಿಹೆಚ್ಚು ಟಿಆರ್‌ಪಿ ಹೊಂದಿರುವ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾರಾಮ(SeethaRama) ಸೀರಿಯಲ್(Serial) ನಟಿ ಪ್ರಿಯಾ(priya) ಪಾತ್ರಧಾರಿ ಮೇಘನಾ ಶಂಕರಪ್ಪ(meghana shankarappa) ಅವರು ನಿಜ ಜೀವನದಲ್ಲಿಯೂ ಕಮಿಟೆಡ್ ಆಗಿದ್ದಾರೆ. ಧಾರಾವಾಹಿಯಲ್ಲಿ ಸೀತಾ ರಾಮ ಮದುವೆಗೂ ಮುನ್ನ ಅಶೋಕ್ ಹಾಗೂ ಪ್ರಿಯಾ ಮದುವೆ ಆಗಿತ್ತು. ಆದರೆ, ಸ್ಟಿಲ್ ಬ್ಯಾಚುಲರ್ ಹುಡುಗಿಗೆ ಮನಸೋತ ಅಭಿಮಾನಿಗಳು ಸಾಕಷ್ಟಿದ್ದರು. ಆದರೆ, ಇದೀಗ ನಟಿ ಮೇಘನಾ ಶಂಕರಪ್ಪ ತಮ್ಮ ಭಾವಿ ಪತಿಯನ್ನು ವೀಕ್ಷರಿಗೆ ಪರಿಚಯಿಸಿದ್ದು, ನಿಜ ಜೀವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.