ನವದೆಹಲಿ: ಪುರುಷರ ಟಿ 20 ವಿಶ್ವಕಪ್ 2024ರ ರಾಯಭಾರಿಯಾಗಿ ಭಾರತದ ಯುವರಾಜ್ ಸಿಂಗ್ ಅವರನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಘೋಷಿಸಿದೆ. ವಿಶ್ವಕಪ್ ಆರಂಭಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವಾಗ, ಯುವರಾಜ್ ಅವರನ್ನ ಉನ್ನತ ಕ್ರಿಕೆಟ್ ಸಂಸ್ಥೆ ಹೆಸರಿಸಿದೆ. ಜೂನ್ 1ರಂದು ಯುಎಸ್‌ಎ ಮತ್ತು ವೆಸ್ಟ್ ಇಂಡೀಸಿನಲ್ಲಿ ಪಂದ್ಯಾವಳಿ ಪ್ರಾರಂಭವಾಗಲಿದ್ದು, ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಜೂನ್ 9 ರಂದು ನ್ಯೂಯಾರ್ಕಿನಲ್ಲಿ ನಡೆಯಲಿದೆ. 2007 ರಲ್ಲಿ ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಇಂಗ್ಲೆಂಡ್ ವಿರುದ್ಧ ಓವರಿನಲ್ಲಿ 36 ರನ್ […]