ಕೋಲ್ಕತಾ: ನಟಿ ಹಾಗೂ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಕಲಿ ಕೋವಿಡ್ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ನಾಲ್ಕು ದಿನಗಳ ಹಿಂದೆ ತೆಗೆದುಕೊಂಡ ನಕಲಿ ಡೋಸ್ ಅನಾರೋಗ್ಯಕ್ಕೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಚಕ್ರವರ್ತಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೂಡಲೇ ಅವರ ಕುಟುಂಬದ ವೈದ್ಯರನ್ನು ಕರೆಸಲಾಯಿತು ಎಂದು ಆಪ್ತ ಮೂಲಗಳು ತಿಳಿಸಿವೆ. ಪಿತ್ತಕೋಶ ಮತ್ತು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಟಿ ಬಳಲುತ್ತಿದ್ದಾರೆ. ನಿರ್ಜಲೀಕರಣ, ಹೊಟ್ಟೆ ನೋವು ಮತ್ತು ರಕ್ತದೊತ್ತಡದಲ್ಲಿ ಏರಿಳಿಕೆಯಾಗುತ್ತಿದೆ ಎಂದು ಹೇಳಿದರು. […]