ಹೈದರಾಬಾದ್: ತೆಲಂಗಾಣದ ಜುಬ್ಲಿ ಹಿಲ್ಸ್ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರೊಂದಿಗೆ ಆಟವಾಡಿ, ಆದರೆ ಮತ ಹಾಕಬೇಡಿ ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್ ಕರೆ ನೀಡಿದ್ದಾರೆ. ಮರು ಆಯ್ಕೆ ಬಯಸಿರುವ ಬಿಆರ್‌ಎಸ್ ಶಾಸಕ ಮಗಂತಿ ಗೋಪಿನಾಥ್ ಪರ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿದ ಕೆ.ಟಿ.ರಾಮ ರಾವ್ (ಕೆಟಿಆರ್), ಅಜರುದ್ದೀನ್ ನಿಮ್ಮ ಮನೆ ಹತ್ತಿರ ಬಂದರೆ, ನಿಮ್ಮ ಮಕ್ಕಳನ್ನು ಅವರೊಂದಿಗೆ ಕ್ರಿಕೆಟ್ ಆಡಲು ಬಿಡಿ. […]