Thursday, 12th December 2024

ಹಳಿ ತಪ್ಪಿದ ರೈಲು: ತಪ್ಪಿದ ಭಾರೀ ಅನಾಹುತ

ಲೂಧಿಯಾನ: ಲೂಧಿಯಾನಾ ಫಿರೋಜ್​ಪುರ ಮಾರ್ಗದ ಮುಲ್ಲಾಪುರ ದಖಾ ಬಳಿ ಗೂಡ್ಸ್​ ರೈಲು ಹಳಿ ತಪ್ಪಿದ್ದು, ಭಾರಿ ಅಪಘಾತ ತಪ್ಪಿರುವ ಘಟನೆ ನಡೆದಿದೆ. ರೈಲು ಬಹಳ ಹೊತ್ತು ಟ್ರ್ಯಾಕ್​ನಲ್ಲೇ ಇದ್ದ ಕಾರಣ, ಈ ಮಾರ್ಗವಾಗಿ ಸಂಚರಿಸಬೇಕಿದ್ದ ಇತರ ಎಲ್ಲ ರೈಲುಗಳ ಕಾರ್ಯಾಚರಣೆಯನ್ನು ಬಂದ್​ ಮಾಡಲಾಗಿತ್ತು. ಇದರಿಂದಾಗಿ ಇತರ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿತ್ತು. ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರೈಲಿನ ಚಕ್ರಗಳನ್ನು ಮತ್ತೆ ಹಳಿಗೆ ಜೋಡಿಸಿ ದ್ದಾರೆ. ಇದೀಗ ಮತ್ತೆ ಎಂದಿನಂತೆ ಅದೇ ಮಾರ್ಗದಲ್ಲಿ ರೈಲುಗಳು […]

ಮುಂದೆ ಓದಿ