ಪುಣೆ: ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನವಿಲೆ ಸೇತುವೆ ಬಳಿ ಸರಣಿ ಅಪಘಾತ ಸಂಭವಿಸಿ ಸುಮಾರು 48 ವಾಹನಗಳು ಜಖಂಗೊಂಡು 30 ಮಂದಿ ಗಾಯ ಗೊಂಡಿದ್ದಾರೆ. ಪುಣೆ ಮಾರ್ಗವಾಗಿ ತೆರಳುತ್ತಿದ್ದ ಟ್ರಕ್ ಬ್ರೇಕ್ ವೈಫಲ್ಯದಿಂದ ಈ ಸರಣಿ ಅಪಘಾತ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೊ ಪಾಲಿಟಿನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಕ್ಷಣಾ ತಂಡ ತೆರಳಿ ಕಾರ್ಯಾ ಚರಣೆ ನಡೆಸಿ ವಾಹನಗಳನ್ನು ತೆರವು ಗೊಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. […]