ಭುವನೇಶ್ವರ್: ಕೋನಾರ್ಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 32 ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಬಂಗಾರದ ಮೌಲ್ಯ ರೂ. 16 ಕೋಟಿ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ-ಭುವನೇಶ್ವರ ಕೊನಾರ್ಕ್ ಎಕ್ಸ್ಪ್ರೆಸ್ನಲ್ಲಿ ಜಿಆರ್ಪಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾಲ್ಕು ಮಂದಿ ಪ್ರಯಾಣಿಕರಿಂದ 32 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಚಿನ್ನಾಭರಣ ಸಾಗಿಸುತ್ತಿದ್ದ ವ್ಯಕ್ತಿಗಳು ಆಭರಣಕ್ಕೆ ಸಂಬಂಧಿಸಿದ ಜಿಎಸ್ಟಿ ದಾಖಲೆಗಳನ್ನ ಪೊಲಿಸರಿಗೆ ನೀಡಲಿಲ್ಲ. ಬಂಧಿತ ನಾಲ್ವರನ್ನು ಮುಂಬೈ ಮೂಲದ ಹಸ್ಮುಖಲಾಲ್ ಜೈನ್, ಸುರೇಶ್ […]