ನವದೆಹಲಿ: ಕೆನರಾ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ಜೆಟ್ ಏರ್ವೇಸ್ನ ಹಳೆಯ ಕಚೇರಿಗಳು ಮತ್ತು ಅದರ ಸಂಸ್ಥಾಪಕ ನರೇಶ್ ಗೋಯಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. 538 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಗೋಯಲ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಜೆಟ್ ಏರ್ವೇಸ್, ಗೋಯಲ್ ಮತ್ತು ವಿಮಾನಯಾನ ಸಂಸ್ಥೆಯ ಕೆಲವು ಮಾಜಿ ಅಧಿಕಾರಿ ಗಳು ಸೇರಿದಂತೆ ದೆಹಲಿ ಮತ್ತು ಮುಂಬೈನ ಸುಮಾರು ಏಳು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ […]