ಕಠ್ಮಂಡು: ನೇಪಾಳ ಪೋಖರಾ ವಿಮಾನ ನಿಲ್ದಾಣದ ಬಳಿ ರನ್ ವೇದಲ್ಲಿ ಪತನಗೊಂಡ ಯೇತಿ ಏರ್ಲೈನ್ಸ್ಗೆ ಸೇರಿದ ವಿಮಾನದಲ್ಲಿದ್ದ 72 ಮಂದಿಯೂ ಮೃತಪಟ್ಟಿದ್ದು, ಅದರಲ್ಲಿ, 70 ಜನರ ಮೃತದೇಹ ಸಿಕ್ಕಿದೆ. ಎರಡು ಶವಗಳಿಗಾಗಿ ಇಂದು ಬೆಳಗ್ಗೆಯಿಂದ ಹುಡುಕಾಟ ನಡೆದಿದೆ. ಇವರಲ್ಲಿ ಐವರು ಭಾರತೀಯರು ಸೇರಿ, ಒಟ್ಟು 42 ಮಂದಿಯ ಗುರುತು ಪತ್ತೆ ಯಾಗಿದೆ. ಜನವರಿ 15ರಂದು ಯೇತಿ ಏರ್ವೇಸ್ಗೆ ಸೇರಿದ ವಿಮಾನವೊಂದು ಕಠ್ಮಂಡುವಿನಿಂದ ಪೋಖರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು. ಲ್ಯಾಂಡ್ ಆಗಲು ಕೆಲವೇ ಕ್ಷಣದ ಮೊದಲು ಅಲ್ಲಿಯೇ ಇದ್ದ […]