ಕಠ್ಮಂಡು : ನೇಪಾಳದಲ್ಲಿ ಬುಧವಾರ 5.3 ರಿಕ್ಟರ್ ಮಾಪಕದ ಭೂಕಂಪ ಸಂಭವಿಸಿದೆ. ಕಠ್ಮಂಡುವಿನ ವಾಯುವ್ಯಕ್ಕೆ 113 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ‘ಭೂಕಂಪದ ಕೇಂದ್ರಬಿಂದು ಬೆಳಿಗ್ಗೆ 5:42ರ ಸುಮಾರಿಗೆ ಲ್ಯಾಂಜಂಗ್ ಜಿಲ್ಲೆಯ ಭುಲ್ಭುಲೆಯಲ್ಲಿದೆ. ಇದು 5.8 ತೀವ್ರತೆಯೊಂದಿಗೆ ದಾಖಲಾಗಿದೆ’ ಎಂದು ರಾಷ್ಟ್ರೀಯ ಭೂಕಂಪ ಮೇಲ್ವಿಚಾರಣೆ ಮತ್ತು ಸಂಶೋಧನಾ ಕೇಂದ್ರದ ಭೂಕಂಪಶಾಸ್ತ್ರಜ್ಞ ಡಾ. ಲೋಕ ಬಿಜಯ್ ಅಧಿಕಾರಿ ಎಎನ್ ಐಗೆ ತಿಳಿಸಿದ್ದಾರೆ. ಯಾವುದೇ ಜೀವ ಹಾನಿ ಇನ್ನೂ ವರದಿಯಾಗಿಲ್ಲ.
ಕಠ್ಮಂಡು: ನೇಪಾಳ ಸಂಸತ್ತನ್ನು ವಿಸರ್ಜಿಸುವ ಪ್ರಧಾನಿ ಕೆರಿ ಶರ್ಮಾ ಒಲಿ ನೇತೃತ್ವ ಸಂಪುಟ ಸಭೆಯ ಶಿಫಾರಸ್ಸಿಗೆ ನೇಪಾಳ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ. ಭಾನುವಾರ ನಡೆದ ತುರ್ತು ಸಭೆಯಲ್ಲಿ...