Friday, 22nd November 2024

ಒಎಲ್ ಎಕ್ಸನಲ್ಲಿ ಪ್ರಧಾನಿ ವಾರಣಾಸಿ ಕಚೇರಿಯನ್ನೇ ಮಾರಾಟಕ್ಕಿಟ್ಟ ಖದೀಮರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಕಚೇರಿಯನ್ನೇ ನಾಲ್ವರು ಯುವಕರು ಒಎಲ್‌ಎಕ್ಸ್‌ನಲ್ಲಿ ಮಾರಾಟ ಕ್ಕಿಟ್ಟಿದ್ದಾರೆ!. ಈ ವಿಷಯ ಗೊತ್ತಾದ ಕೂಡಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಜವಾಹರ್‌ ನಗರದಲ್ಲಿರುವ ಪ್ರಧಾನಿಯವರ ಜನಸಂಪರ್ಕ ಕಾರ್ಯಾಲಯದ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಆರೋಪಿಯೊಬ್ಬ ಅದನ್ನು ಒಎಲ್‌ಎಕ್ಸ್‌ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿದ್ದ. ಈ ಕಚೇರಿ ಮಾರಾಟಕ್ಕಿದೆ ಎಂದೂ ಉಲ್ಲೇಖಿಸಿದ್ದ. ಈ ವಿಷಯ ಗುರುವಾರ ನಮ್ಮ ಗಮನಕ್ಕೆ ಬಂದಿತ್ತು. ಕೂಡಲೇ ಭೇಲುಪುರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ಕೊಂಡು ತನಿಖೆ ಕೈಗೊಳ್ಳಲಾಗಿತ್ತು’ ಎಂದು […]

ಮುಂದೆ ಓದಿ