ಮುಂಬಯಿ: ಬಾಲಿವುಡ್ ನ ನಿರ್ಮಾಪಕ ಯಶ್ ಚೋಪ್ರಾ (74) ಪತ್ನಿ ಪಮೇಲಾ ಚೋಪ್ರಾ ಗುರುವಾರ ನಿಧನರಾಗಿದ್ದಾರೆ. ಹಿನ್ನೆಲೆ ಗಾಯಕಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಅವರು ಕಳೆದ 15 ದಿನಗಳಿಂದ ಅನಾರೋಗ್ಯ ದಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಂಟಿಲೇಟೆರ್ ನಲ್ಲಿದ್ದ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಪಮೇಲಾ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ ನ ಡಾಕ್ಯುಮೆಂಟರಿ ʼದಿ ರೊಮ್ಯಾಂಟಿಕ್ಸ್ʼ ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ತನ್ನ ಪತಿ ಯಶ್ ರಾಜ್ ಅವರ ಸಿನಿಮಾ ಜರ್ನಿ ಬಗ್ಗೆ ಮಾತಾನಡಿದ್ದರು. […]