ಟೋಕಿಯೋ : ಬಾಕ್ಸರ್ ಪೂಜಾ ರಾಣಿ ಟೋಕಿಯೊ ಒಲಿಂಪಿಕ್ಸ್’ನಲ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದು ವರಿಸಿದ್ದಾರೆ. ಬುಧವಾರ ನಡೆದ 16ನೇ ಸುತ್ತಿನಲ್ಲಿ ಅಲ್ಜೀರಿಯಾದ ಇಚ್ರಾಕ್ ಚೈಬ್ ಅವರನ್ನು ಸೋಲಿಸುವ ಮೂಲಕ ಮಹಿಳೆಯರ 75 ಕೆಜಿ ಮಿಡಲ್ ವೇಟ್ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದರು. ಹಾಲಿ ಏಷ್ಯನ್ ಚಾಂಪಿಯನ್ ಮತ್ತು ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಪೂಜಾ ರಾಣಿ, ಎದುರಾಳಿಯ ವಿರುದ್ಧ 5-0 ಗೆಲುವು ದಾಖಲಿಸಿದರು. ಭಿವಾನಿಯ ಪೂಜಾ ಮೇ ತಿಂಗಳಲ್ಲಿ ಏಷ್ಯನ್ ಬಾಕ್ಸಿಂಗ್ […]