ಡೆಹ್ರಾಡೂನ್: ಕೇದಾರನಾಥ ದೇಗುಲದ ಆವರಣದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡಿದ್ದು, ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಸುಮಾರು ಎರಡು ದಿನಗಳ ಹಳೆಯದಾಗಿದೆ ಎಂದು ಹೇಳಲಾಗಿದ್ದು, ಇದರಲ್ಲಿ ಯುವತಿ ಮತ್ತು ಆಕೆಯ ಗೆಳೆಯ ಇಬ್ಬರೂ ಹಳದಿ ಬಟ್ಟೆಯನ್ನು ಧರಿಸಿರುವು ದನ್ನು ಕಾಣಬಹುದು. ಯುವತಿ ತನ್ನ ಮಂಡಯೂರಿ ಪ್ರಿಯಕರನಿಗೆ ಉಂಗುರ ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದಾಳೆ. ಆ ನಂತರ ಇಬ್ಬರೂ ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ. ಈ ವಿಡಿಯೋಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. […]