ತಿರುವನಂತಪುರ: ತಾಯಿಯೊಬ್ಬರು ತಮ್ಮ ಮಗನನ್ನು 10ನೇ ತರಗತಿಯಲ್ಲಿ ಓದಲು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದ್ದರು. ಆದರೆ, ಅವರ ನಿರಂತರ ಕಲಿಕೆಯು ಕೇರಳ ಲೋಕಸೇವಾ ಆಯೋಗದ (ಪಿಎಸ್ಸಿ) ಪರೀಕ್ಷೆಯಲ್ಲಿ ತೇರ್ಗಡೆ ಯಾಗುವಂತೆ ಪ್ರೇರೇಪಿಸಿದೆ. 42 ವರ್ಷದ ಬಿಂದು ಅವರು ಕೆಳ ದರ್ಜೆಯ ನೌಕರಿ (ಎಲ್ಜಿಎಸ್) ಪರೀಕ್ಷೆಯಲ್ಲಿ 92ನೇ ರ್ಯಾಂಕ್ನೊಂದಿಗೆ ತೇರ್ಗಡೆಯಾಗಿದ್ದರೆ, ಅವರ 24 ವರ್ಷದ ಮಗ ವಿವೇಕ್ ಎಲ್ಡಿಸಿ ಪರೀಕ್ಷೆಯಲ್ಲಿ 38ನೇ ರ್ಯಾಂಕ್ ಪಡೆದಿದ್ದಾರೆ. ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಬಯಕೆಯೊಂದಿಗೆ ತಾಯಿ -ಮಗ ಇಬ್ಬರೂ ಒಟ್ಟಿಗೆ ಖಾಸಗಿ ಕೋಚಿಂಗ್ […]