ರಾಜಸ್ಥಾನ: ಟ್ರಕ್ ಗೆ ಕಾರು ಢಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯ ಗಂಗುಖೇಡಿ ಗ್ರಾಮದ ದೇವಿ ಸಿಂಗ್ (50), ಅವರ ಪತ್ನಿ ಮಾಂಖೋರ್ ಕನ್ವರ್ (45), ಅವರ ಸಹೋದರ ರಾಜಾರಾಂ (40) ಮತ್ತು ಸೋದರಳಿಯ ಜಿತೇಂದ್ರ (20) ಮೃತರು. ಈ ನಾಲ್ವರು ಕಾರಿನಲ್ಲಿ ಪುಷ್ಕರ್ ಗೆ ತೆರಳುತ್ತಿದ್ದಾಗ ಶನಿವಾರ ಮಧ್ಯರಾತ್ರಿ ಸುಮಾರಿಗೆ ಹಿಂದೋಲಿ ಪಟ್ಟಣದ ಬಳಿ ಇವರ ಕಾರು ಹಿಂದಿನಿಂದ ಹೆವಿ ಡ್ಯೂಟಿ ಟ್ರಕ್‌ಗೆ ಢಿಕ್ಕಿಯಾಗಿದೆ. […]