ಅಭಿಮತ ಪೃಥ್ವಿರಾಜ್ ಕುಲಕರ್ಣಿ ರಾಮಾಯಣದಲ್ಲಿ ರಾಮ ಸೇತುವೆ ಕಟ್ಟುವಾಗ ವಾನರ ಸೈನ್ಯ ಬಂಡೆಗಳನ್ನು ಆಯ್ದು ತಂದು, ಅದರ ಮೇಲೆ ಜೈ ಶ್ರೀರಾಮ ಎಂದು ಬರೆದು ತೇಲಿ ಬಿಡುತ್ತಿದ್ದರು. ಅದರ ಬಗ್ಗೆ ಲಂಕಾದಲ್ಲಿ ಚರ್ಚೆಯಾಗುತ್ತದೆ. ಜನರು ರಾವಣನ ಹತ್ತಿರ ಬಂದು ‘ನಿಮ್ಮ ಶತ್ರು ಮಾಯಾವಿ ಇದ್ದಾನೆ. ಅವನ ಹೆಸರಲ್ಲಿ ಕಲ್ಲುಗಳೂ ತೇಲುತ್ತವೆ’ ಎಂದು ತಮ್ಮ ಆತಂಕ ತೋಡಿಕೊಳ್ಳತೊಡಗಿದರು. ಆಗ ರಾವಣ, ‘ಆ ಕಾರ್ಯವನ್ನೂ ನಾನೂ ಮಾಡಬಲ್ಲೆ, ಬನ್ನಿ’ ಎನ್ನುತ್ತಾ ಸಮುದ್ರದ ದಡಕ್ಕೆ ಕರೆದುಕೊಂಡು ಹೋಗಿ ಒಂದು ಕಲ್ಲನ್ನು ಎತ್ತಿಕೊಂಡು […]