ಮುಂಬೈ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬ್ಯಾಂಕುಗಳಿಗೆ ರಾಹುಲ್ ದ್ರಾವಿಡ್ರ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಬ್ಯಾಂಕ್ ಮಾತ್ರವಲ್ಲ, ಎನ್ಬಿಎಫ್ಸಿ ಮತ್ತಿತರ ಹಣಕ್ಷೇತ್ರದ ಸರ್ವರಿಗೂ ಅನ್ವಯಿಸಿ ಅವರು ಸಲಹೆ ನೀಡಿದ್ದಾರೆ. ರಾಹುಲ್ ದ್ರಾವಿಡ್ ಹೆಸರನ್ನು ಕ್ರಿಕೆಟ್ ಪ್ರೇಮಿಗಳಲ್ಲದವರೂ ಕೇಳಿದ್ದೇ ಇರುತ್ತಾರೆ. ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ದಿ ವಾಲ್, ಮಿಸ್ಟರ್ ಡಿಪೆಂಡಬಲ್. ಇನ್ನಿಂಗ್ಸ್ ಕಟ್ಟುವುದರಲ್ಲಿ ನಿಸ್ಸೀಮ. ರಕ್ಷಣಾತ್ಮಕವಾಗಿ ಆಡಿ ಎದುರಾಳಿ ಬೌಲರ್ಗಳನ್ನು ನಿಸ್ತೇಜ ಗೊಳಿಸಬಲ್ಲ ಚಾಣಾಕ್ಷ್ಯ ಆಟಗಾರ. ಆಟದ ಮೈದಾನದಲ್ಲಿ, ಅದರಲ್ಲೂ ಬ್ಯಾಟಿಂಗ್ […]