ಜಪಾನ್: ಡಚ್ ವಿದ್ಯಾರ್ಥಿ ಕೊಂದು, ಅತ್ಯಾಚಾರ ಎಸಗಿ, ದೇಹದ ಭಾಗಗಳನ್ನು ತಿಂದಿದ್ದ ಜಪಾನಿನ ನರಭಕ್ಷಕ, ವಿಕೃತಕಾಮಿ ಇಸ್ಸೆ ಸಗಾವಾ (73) ಇಹಲೋಕ ತ್ಯಜಿಸಿದ್ದಾನೆ. ಪಾತಕಿಗಳ ಲೋಕದಲ್ಲಿ ಸಗಾವನಿಗೆ ಬಹಳಷ್ಟು ಕುಖ್ಯಾತಿ. ಆತ ʼಕೋಬ್ ಕ್ಯಾನಿಬಾಲ್ʼ (ನರಭಕ್ಷಕ) ಎಂದು ಕರೆಸಿಕೊಳ್ಳುತ್ತಿದ್ದ. ಚಿಕ್ಕವಯಸ್ಸಿನಿಂದಲೇ ನರಭಕ್ಷಣೆಯ ಕುರಿತು ಸೆಳೆತ ಹೊಂದಿದ್ದ ಸಗಾವ ತನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಆಸೆಯನ್ನು ಕಾರ್ಯರೂಪಕ್ಕೆ ತಂದಿದ್ದು 1981 ರಲ್ಲಿ. ಆಗ 28 ವರ್ಷದವನಾಗಿದ್ದ ಸಾಗವಾ ಪ್ಯಾರಿಸ್ನ ಪ್ರತಿಷ್ಠಿತ ಸರ್ಬೋನೆ ಯೂನಿವರ್ಸಿಟಿ ಯಲ್ಲಿ ಪಾಶ್ಚಾತ್ಯ ಭಾಷೆಗಳ ಅಧ್ಯಯನ ಮಾಡುತ್ತಿದ್ದಾಗ ಪರಿಚಯವಾಗಿದ್ದ […]