ಉತ್ತರಪ್ರದೇಶ: ರೈಲಿನ ಜನರಲ್ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಉಳಿದ ಪ್ರಯಾಣಿಕರು ಅನಿವಾರ್ಯವಾಗಿ ಶವದೊಂದಿಗೆ ಸುಮಾರು 600 ಕಿ.ಮೀ. ದೂರ ಸಂಚರಿಸಿದ ಘಟನೆ ನಡೆದಿದೆ. ಚೆನ್ನೈನಿಂದ ಹಜರತ್ ನಿಜಾಮುದ್ದೀನ್‌ಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲ್ ನ ಜನರಲ್ ಕೋಚ್ನಲ್ಲಿ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ರಾಮ್‌ಜೀತ್ ಯಾದವ್ (36 ) ಅನಾರೋಗ್ಯದಿಂದ ಬಳಲುತ್ತಿದ್ದು ಸೋದರ ಮಾವ ಗೋವರ್ಧನ ಅವರೊಂದಿಗೆ ಉತ್ತರಪ್ರದೇಶಕ್ಕೆ ತೆರಳುತ್ತಿದ್ದರು. ರೈಲು ನಾಗ್ಪುರ ತಲುಪಿದಾಗ ರಾಮ್‌ಜೀತ್ ಅವರ ಆರೋಗ್ಯದಲ್ಲಿ […]