ನವದೆಹಲಿ: ಭದ್ರತೆ ಲೋಪ ಎಸಗಿ ಲೋಕಸಭೆಗೆ ನುಗ್ಗಿ ಕಲರ್ ಗ್ಯಾಸ್ ಸಿಡಿಸಿದ ಘಟನೆಯ ಬಗ್ಗೆ ಭದ್ರತಾ ಸಂಸ್ಥೆಗಳ ಪ್ರಾಥಮಿಕ ತನಿಖೆಯಲ್ಲಿ. ಏಳು ಮಂದಿ ಆರೋಪಿಗಳು ದಾಳಿಯನ್ನು ಸಾಕಷ್ಟು ಪ್ಲ್ಯಾನ್ ಮಾಡಿಯೇ ಸಂಘಟಿಸಿದ್ದರು ಎಂದು ತಿಳಿದುಬಂದಿದೆ. ಆ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಎಂಟು ಸಂಸತ್ ಸಿಬ್ಬಂದಿಯನ್ನು ಅಮಾನತುಗೊಳಿಸ ಲಾಗಿದೆ. ಘಟನೆ ಸಂಬಂಧ ಮೈಸೂರಿನ ಡಿ.ಮನೋರಂಜನ್, ಉತ್ತರ ಪ್ರದೇಶದ ಸಾಗರ್ ಶರ್ಮಾ, ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ, ಹರ್ಯಾಣದ ಹಿಸಾರ್‌ನ ನೀಲಮ್ […]