ನವದೆಹಲಿ: ಸಿಯಾಚಿನ್ ಹಿಮನದಿಯ ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ಅಧಿಕಾರಿ ನಿವೃತ್ತ ಕರ್ನಲ್ ನರೇಂದ್ರ ‘ಬುಲ್’ ಕುಮಾರ್(87) ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕರ್ನಲ್ ನರೇಂದ್ರ ‘ಬುಲ್’ ಕುಮಾರ್ ಈಗ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿ ಯಲ್ಲಿ ಜನಿಸಿ ಕುಮೋವಾನ್ ರೆಜಿಮೆಂಟ್‌ಗೆ ಸೇರ್ಪಡೆಯಾಗಿದ್ದರು. ರಹಸ್ಯ ಸಾಹಸ ಯಾತ್ರೆಯ ನಂತರ, ಸಿಯಾಚಿನ್‌ನ ಕಾರ್ಯತಂತ್ರದ ಮಹತ್ವದ ಬಗ್ಗೆ ಕುಮಾರ್ ನೀಡಿದ್ದ ವರದಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ “ಆಪರೇಷನ್ ಮೇಘದೂತ್” ನಡೆಸಲು ಪ್ರೇರಣೆಯಾಗಿತ್ತು. […]