ವೀರೇಶ್ ಎನ್.ಪಿ. ದೇವರಬೆಳಕೆರೆ ಯಾರೋ ಒಬ್ಬರು ನಮ್ಮನ್ನು ಅವರ ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ನಂತರ ದೂರ ತಳ್ಳಿದರು ಎಂದು ಕೊರಗಬಾರದು. ಅವರಿಗೆ ನಮ್ಮ ಅವಶ್ಯಕತೆ ಮುಗಿಯಿತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾದ ಸಂದರ್ಭವಷ್ಟೆ. ನಮ್ಮ ಯೋಗ್ಯತೆ ಯನ್ನು ನಾವೇ ಹಳಿದುಕೊಂಡು, ಬಿಟ್ಟು ಹೋದವರ ಬಗ್ಗೆ ನಾವು ಕೊರಗುವುರಿಂದ ಯಾವ ಪ್ರಯೋಜನವಿಲ್ಲ. ಯಾವುದೇ ನೋವಿನ ನಂತರ ನಮ್ಮ ಬದಲಾವಣೆ ಹೇಗಿರಬೇಕೆಂದರೆ, ನಮಗೆ ನಂಬಿಕೆ ದ್ರೋಹ ಬಗೆದವರೂ ಕೂಡ ನಮ್ಮ ಪ್ರಗತಿ ಕಂಡು ಅಚ್ಚರಿ ಪಡುವಂತಿರಬೇಕು. ನಮ್ಮಲ್ಲಿ ಇಲ್ಲದರ ಬಗ್ಗೆ […]