ತಿರುವನಂತಪುರ: ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ವಾಸ್ತವ್ಯಕ್ಕೆ ಸುರಕ್ಷಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ‘ಸ್ಟುಡಿಯೊ ಅಪಾರ್ಟ್ಮೆಂಟ್’ ಸ್ಥಾಪಿಸಲು ಕೇರಳ ಸರ್ಕಾರ ಯೋಜನೆ ರೂಪಿಸಿದೆ. ಕಾರ್ಮಿಕ ಮತ್ತು ಕೌಶಲ ಇಲಾಖೆ ಈ ಸಂಬಂಧ ಈಗಾಗಲೇ ಕಾರ್ಯಪ್ರವೃತ್ತ ವಾಗಿದ್ದು, ಆರಂಭಿಕ ಹಂತದಲ್ಲಿ ಪರೀಕ್ಷಾರ್ಥ ಯೋಜನೆಗಾಗಿ ಮೀನಂಕುಳಂ ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ ಎಂದು ಕಾರ್ಮಿಕ ಸಚಿವ ವಿ. ಶಿವನ್ಕುಟ್ಟಿ ಹೇಳಿದ್ದಾರೆ. ಕಿನ್ಫ್ರಾ ಇಂಟರ್ನ್ಯಾಶನಲ್ ಅಪಾರೆಲ್ ಪಾರ್ಕ್ನಲ್ಲಿ ಕ್ಯಾಂಪಸ್ ಸಜ್ಜುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಮಾದರಿ ಯಲ್ಲಿ ಎಲ್ಲ […]