ಸುಧಕ್ಕನ ಕಥೆಗಳು ಸುಧಾಮೂರ್ತಿ ಪಟ್ಟಣದಲ್ಲಿ ಬೆಳೆದ ಮಕ್ಕಳಿಗೆ ಹಳ್ಳಿಯ ಜೀವನ ಚೆನ್ನ ಅನಿಸಿದರೂ ಅವರಿಗೆ ಕೃಷಿಯ ಬಗ್ಗೆ ಏನೂ ಗೊತ್ತಿರಲಿಲ್ಲ. ಅನುಷ್ಕಾ ಳಂತೂ ‘‘ಅಜ್ಜಿ ನಮ್ಮ ಮನೆಯ ಮುಂದೆ ಮಾವಿನ ಇದೆಯಲ್ಲಾ, ಅದೇ ಥರ ಅಕ್ಕಿಯ ಮರವು ಇರುವುದಾ? ಗೋದಿಯೂ ಹಾಗೆ ಬರುವುದೇ? ಎಂದಾಗ ಎಲ್ಲರೂ ನಕ್ಕರು. ಉಳಿದವರೆಲ್ಲಾ ಅವಳಿಗಿಂತ ದೊಡ್ಡವರು. ಅದಲ್ಲದೇ ಇದಕ್ಕೂ ಮೊದಲು ಅಜ್ಜಿ ಅವರಿಗೆ ಹೊಲ, ತೋಟ, ಗದ್ದೆಗಳಿಗೆ ಕರೆದು ಕೊಂಡು ಹೋಗಿದ್ದಳು. ಅಜ್ಜ ಅವರೊಡನೆ ಕೂತುಕೊಂಡು ನಗುತ್ತಿದ್ದರು. ಮಕ್ಕಳೇ ರೈತನ ಕಷ್ಟ […]