ಭುವನೇಶ್ವರ್: ಒಡಿಯಾ ಗಾಯಕಿ ತಾಪು ಮಿಶ್ರಾ(36ವರ್ಷ) ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿಗೆ ಬಲಿಯಾದರು. ಮೇ 10ರಂದು ತಾಪು ತಂದೆ ಕೂಡಾ ಕೋವಿಡ್ 19 ಸೋಂಕಿನಿಂದ ಮೃತರಾಗಿದ್ದರು. ತಾಪು ಮಿಶ್ರಾ ಅವರು ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, ಎರಡು ದಿನಗಳ ನಂತರ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು ಎಂದು ವರದಿ ವಿವರಿಸಿದೆ. ಮೇ 19ರಂದು ಆಸ್ಪತ್ರೆಗೆ ದಾಖಲಾಗಿದ್ದ ತಾಪು ಮಿಶ್ರಾ ಅವರ ಶ್ವಾಸಕೋಶ ಗಂಭೀರವಾಗಿ ಹಾನಿಗೊಳಗಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿದೆ. ಕೋವಿಡ್ ನಿಂದ ಬಳಲುತ್ತಿದ್ದ ಮಿಶ್ರಾ ಅವರಿಗೆ ಚಿಕಿತ್ಸೆಗಾಗಿ ಕಲಾವಿದರ […]