ನವದೆಹಲಿ: ಶಾಲೆಯೊಂದರ ವಿದ್ಯಾರ್ಥಿ ಗಣಿತ ಪರೀಕ್ಷೆಯಲ್ಲಿ ಕೇಳಲಾದ ಎಲ್ಲ ಪ್ರಶ್ನೆಗಳಿಗೆ ‘ಥಾಲಾ’ ಎಂದು ಉತ್ತರಿಸಿದ್ದಕ್ಕಾಗಿ ಶಾಲೆಯಿಂದ ಆತನನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿ ಗಜೋಧರ್ ಗಣಿತ ಪರೀಕ್ಷೆಗೆ ಹಾಜರಾಗಿದ್ದ. ಎಲ್ಲ ಪ್ರಶ್ನೆಗಳಿಗೆ ತನ್ನ ಉತ್ತರ ಪತ್ರಿಕೆಯಲ್ಲಿ ‘ಥಾಲಾ’ ಎಂದು ಬರೆದಿದ್ದ. ತನ್ನ “ಐಡಲ್” ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗೌರವ ಸಲ್ಲಿಸಲು ಉತ್ತರ ಪತ್ರಿಕೆಯಲ್ಲಿ ಹೀಗೆ ಬರೆದಿರುವುದಾಗಿ ವಿದ್ಯಾರ್ಥಿ ಹೇಳಿರುವು ದಾಗಿ ಶಾಲೆಯ ಮೂಲಗಳು ತಿಳಿಸಿವೆ. ಶಾಲೆಯ ಅಧಿಕಾರಿಯೊಬ್ಬರು ಈ ಘಟನೆಗೆ ಸಂಬಂಧಿಸಿದಂತೆ […]