ಬೆನೋನಿ: ಪ್ರಭಾರತ, ಮಂಗಳವಾರ ನಡೆಯುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ಈ ಬಾರಿ ಸತತ ಐದು ಗೆಲುವುಗಳೊಂದಿಗೆ ಅಮೋಘ ಫಾರ್ಮಿನಲ್ಲಿದೆ. ಪ್ರತಿಭಾನ್ವಿತ ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಸುಲಭ ಗೆಲುವುಗಳಿಗೆ ಕಾರಣವಾಗಿದೆ. ಬ್ಯಾಟರ್‌ಗಳು ರನ್ನಿನ ಹೊಳೆ ಹರಿಸಿದರೆ, ಬೌಲರ್‌ಗಳು ಪರಿಣಾಮಕಾರಿಯಾಗಿದ್ದಾರೆ. 18 ವರ್ಷದ ಮುಶೀರ್ ಖಾನ್ ಅವರು ಎರಡು ಶತಕ, ಒಂದು ಅರ್ಧ ಶತಕದೊಡನೆ ಈ […]