ಬೆಂಗಳೂರು: ಕ್ಯಾನ್ಸರ್ ಕಾಯಿಲೆಗೆ (Cancer) ಸಂಬಂಧಿಸಿ ಅಮೆರಿಕದಲ್ಲಿ ಸರ್ಜರಿಗೆ ಒಳಗಾದ ನಟ ಶಿವರಾಜ್ ಕುಮಾರ್ (Shiva Rajkumar) ಹೊಸ ವರ್ಷದ ಮೊದಲ ದಿನ ಸಿಹಿ ಸುದ್ದಿ ನೀಡಿದ್ದಾರೆ. ʼತಾನು ಈಗ ಕ್ಯಾನ್ಸರ್ ಫ್ರೀʼ ಎಂದು ಅವರು ಹೇಳಿದ್ದು, ತಮ್ಮ ಮೂತ್ರಕೋಶ (Urinary bladder) ತೆಗೆಯಲಾಗಿದೆ ಎಂಬ ವಿವರವನ್ನು ನೀಡಿದ್ದಾರೆ. ಹೊಸ ವರ್ಷದಲ್ಲಿ ದುಪ್ಪಟ್ಟು ಉತ್ಸಾಹದೊಂದಿಗೆ ತಾನು ಮರಳಿ ಬರಲಿದ್ದೇನೆ ಎಂದಿರುವ ಅವರು, ಈ ಕುರಿತು ಆಸ್ಪತ್ರೆಯಿಂದಲೇ ಅವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅಮೆರಿಕದ ಮಿಯಾಮಿ […]