ಮುಂಬೈ: ಬಾಲಿವುಡ್ನ ಹಾಟ್ ಬೆಡಗಿ ನಟಿ ಊರ್ವಶಿ ರೌಟೇಲಾ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದ ಬೆನ್ನಲ್ಲೇ ಊರ್ವಶಿಯಿಂದ ಶಾಕಿಂಗ್ ಉತ್ತರ ಹೊರಬಿದ್ದಿದೆ. ‘ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ. ಈಗ ನಾನು ರಾಜಕೀಯಕ್ಕೆ ಹೋಗಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಬೇಕು’ ಎಂದು ಹಾಸ್ಯಸ್ಪದವಾಗಿ ಹೇಳಿದರು. ನಾನು ರಾಜಕೀಯಕ್ಕೆ ಹೋಗುತ್ತೇನೋ, ಇಲ್ಲವೋ ಎಂಬುದು ನನಗೆ ತಿಳಿದಿಲ್ಲ. ಆದರೆ ಖಂಡಿತವಾಗಿ ಒಂದಂತು ಅಭಿಮಾನಿಗಳಿಂದ ತಿಳಿಯಲು ಬಯಸುವುದು ಏನಂದ್ರೆ, ನಾನು ರಾಜಕೀಯಕ್ಕೆ ಸೇರಬೇಕೇ ಅಥವಾ ಬೇಡವೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು […]